Mourning of Great Poet Girish Karnad

ಗಿರೀಶ್ ಕಾರ್ನಾಡ್

ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ. ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ  ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು.